🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಚಿಕ್ಕಬಳ್ಳಾಪುರ ಭಯೋತ್ಪಾದನೆ ಸಂಚು ಪ್ರಕರಣ:  ಸಿ.ಟಿ.ರವಿ ಆಕ್ರೋಶ, 

---Advertisement---

 

​ಚಿಕ್ಕಮಗಳೂರು: ಚಿಕ್ಕಬಳ್ಳಾಪುರದಲ್ಲಿ ಯುವಕನೋರ್ವ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಭದ್ರತೆ ಹಾಗೂ ಜಿಹಾದಿ ಮಾನಸಿಕತೆಯ ಕುರಿತು ಹಲವು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

​ದೇಶ ವಿಭಜನೆಯಾದರೂ ಜಿಹಾದಿ ಮಾನಸಿಕತೆ ಬದಲಾಗಿಲ್ಲ ಎಂದು ಸಿ.ಟಿ.ರವಿ ಕಿಡಿಕಾರಿದ್ದಾರೆ. “ಜಿಹಾದಿ ಮಾನಸಿಕತೆ ಇಲ್ಲದಿದ್ದರೆ ಪೆಹಲ್ಗಾಮ್‌ನಲ್ಲಿ ಅಮಾಯಕರ ಹತ್ಯೆ ಏಕೆ ನಡೆಯುತ್ತಿತ್ತು? ಅಷ್ಟೇ ಅಲ್ಲದೆ, ನನ್ನಂತವರನ್ನು ಏಕೆ ಟಾರ್ಗೆಟ್ ಮಾಡುತ್ತಿದ್ದರು?” ಎಂದು ಪ್ರಶ್ನಿಸಿದ ಅವರು, ರಾಷ್ಟ್ರವಿರೋಧಿ ಶಕ್ತಿಗಳ ದುರುದ್ದೇಶವನ್ನು ನಾವು ಪದೇ ಪದೇ ಸಮಾಜದ ಮುಂದಿಡುವುದರಿಂದಲೇ ನಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದರು.

​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು, “ನಾನು ರಾಜಕೀಯ ಲಾಭಕ್ಕಾಗಿ ಮಾತನಾಡುವ ವ್ಯಕ್ತಿಯಲ್ಲ. ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಗಳ ಬಗ್ಗೆ ಸಮಾಜವನ್ನು ಜಾಗೃತಗೊಳಿಸುವುದು ನನ್ನ ಕರ್ತವ್ಯ. ದೇಶ ಹಾಗೂ ಸಮಾಜದ ರಕ್ಷಣೆಯ ಹಾದಿಯಲ್ಲಿ ಸಾವು ಬರುತ್ತದೆ ಎಂದರೆ ಹೆದರಿ ಓಡಿಹೋಗುವ ಹೇಡಿ ನಾನಲ್ಲ. ನಾವು ಭಯೋತ್ಪಾದನೆ, ಭಯೋತ್ಪಾದಕರು ಹಾಗೂ ‘ಲವ್ ಜಿಹಾದ್’ ಅನ್ನು ಬಲವಾಗಿ ಖಂಡಿಸುತ್ತೇವೆ,” ಎಂದು ಸ್ಪಷ್ಟಪಡಿಸಿದರು.

​ಪ್ರಕರಣದ ಆಳವಾದ ತನಿಖೆಗೆ ಒತ್ತಾಯಿಸಿದ ಅವರು, “ಈಗಾಗಲೇ ಪೊಲೀಸರು ಹಾಸನ, ಹೊಸಕೋಟೆ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗಗಳಲ್ಲಿ ಪ್ರಮುಖ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಇದರಲ್ಲಿ ಒಬ್ಬನೇ ಯುವಕ ಭಾಗಿಯಾಗಿದ್ದಾನೆಯೇ ಅಥವಾ ಇದರ ಹಿನ್ನೆಲೆಯಲ್ಲಿ ದೊಡ್ಡ ಸಂಘಟನೆ ಅಥವಾ ನೆಟ್‌ವರ್ಕ್ ಕೆಲಸ ಮಾಡುತ್ತಿದೆಯೇ ಎಂಬುದು ಸಮಗ್ರ ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ,” ಎಂದು ಹೇಳಿದರು

Join WhatsApp

Join Now

Join Telegram

Join Now