ಎನ್.ಆರ್. ಪುರ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ಪುನಾರಚನೆ ಹಾಗೂ ಶಾಸಕರ ದೆಹಲಿ ಭೇಟಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಸ್ಥಾನಕ್ಕಾಗಿ ಶಾಸಕರು ದೆಹಲಿ ಪ್ರವಾಸ ಕೈಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ದೆಹಲಿಗೆ ಹೋದರೆ ತಪ್ಪೇನು? ಹೋಗಬಾರದೆಂದು ಹೇಳಿದವರು ಯಾರು? ಇದರಲ್ಲಿ ಯಾವುದೇ ತಂಟೆ-ತಕರಾರು ಇಲ್ಲ” ಎಂದು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ಪುನಾರಚನೆ ಕುರಿತಂತೆ ಮಾತನಾಡಿದ ಸಿಎಂ, “ಪುನಾರಚನೆ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಸಾಮಾನ್ಯವಾಗಿ ಎರಡೂವರೆ ವರ್ಷಗಳ ಬಳಿಕ ಮಾಡಬೇಕಾಗುತ್ತದೆ. ಐದು ರಾಜ್ಯಗಳ ಚುನಾವಣೆ ಹಾಗೂ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಇದು ವಿಳಂಬವಾಗಿದೆ” ಎಂದು ಹೇಳಿದರು.
ರಾಜಕೀಯ ಕಾರ್ಯದರ್ಶಿಯ ರಾಜೀನಾಮೆ ಕುರಿತು ಪ್ರಶ್ನಿಸಿದಾಗ, “ಇನ್ನೂ ರಾಜೀನಾಮೆ ಕೊಟ್ಟಿಲ್ಲ, ಕೊಡಬಹುದು ಎಂದು ನಾನು ಅಂದುಕೊಂಡಿದ್ದೇನೆ” ಎಂದು ಹೇಳಿದರು. ಜೊತೆಗೆ ಹೈಕಮಾಂಡ್ನಿಂದ ಬಂದ ಇಂಚಾರ್ಜ್ ದಾವಣಗೆರೆ ಉಪಚುನಾವಣೆಯಲ್ಲಿ ಭಾಗವಹಿಸಿದ್ದರು, ಅವರ ವರದಿ ಆಧಾರವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಪಕ್ಷ ಸೋಲಿನ ಕುರಿತು ಕೇಳಿದಾಗ, ಸಿಎಂ ಪ್ರತಿಕ್ರಿಯಿಸಿ, “ತಲೆದಂಡ ಆದ್ರೆ ಸೋಲ್ತೀವಿ ಅಂತಾನೇ? ನಾವು ಸೋಲನ್ನು ಒಪ್ಪಿಕೊಂಡಿಲ್ಲ. ಗೆಲ್ಲೋದು ನಾವೇ. ನಮ್ಮವರೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಹೇಳಿದ್ದೇನೆ ಹೊರತು ನಾವು ಸೋಲುತ್ತೇವೆ ಎಂದಿಲ್ಲ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.















Leave a Reply