🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ನಕಲಿ ಲೇಡಿ ಪಿಎಸ್ಐ ಬಂಧನ, 25ಕ್ಕೂ ಅಧಿಕ ಮಂದಿಗೆ ಕೋಟ್ಯಾಂತರ ರೂ. ವಂಚನೆ

---Advertisement---

 ಚಿಕ್ಕಮಗಳೂರು: ತಾನು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಎಂದು ನಂಬಿಸಿ ಹಣ, ಚಿನ್ನ ಪಡೆದು ಕೋಟ್ಯಾಂತರ ರೂಪಾಯಿ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ನಕಲಿ ಲೇಡಿ ಪಿಎಸ್ಐಯನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ರಾಮನಗರ ಜಿಲ್ಲೆಯ ನಿವೇದಿತಾ ಗೌಡ ಬಂಧಿತ ಆರೋಪಿ. ಚಿಕ್ಕಮಗಳೂರು ನಗರದಲ್ಲಿ ಕೆಫೆ ನಡೆಸುತ್ತಿದ್ದ ಈಕೆ, ತಾನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆಯ ಪಿಎಸ್ಐ ಎಂದು ಪರಿಚಯಿಸಿಕೊಂಡು ಹಲವರನ್ನು ವಂಚಿಸುತ್ತಿದ್ದಳು ಎನ್ನಲಾಗಿದೆ.

ಪೊಲೀಸ್ ಅಧಿಕಾರಿಯಂತೆ ಕಾಣುವಂತೆ ಹೇರ್‌ಕಟ್ ಹಾಗೂ ಉಡುಗೆ ಧರಿಸುತ್ತಿದ್ದ ನಿವೇದಿತಾ, ಕೆಫೆಗೆ ಬರುತ್ತಿದ್ದ ಮಹಿಳೆಯರು ಮತ್ತು ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದಳು ಎನ್ನಲಾಗಿದೆ. ಡ್ಯೂಟಿಗೆ ರಜೆ ಮಾಡಿ ಬಂದಿರುವುದಾಗಿ ಹೇಳಿಕೊಂಡು ಪರಿಚಯ ಬೆಳೆಸಿಕೊಳ್ಳುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪರಿಚಯವಾದವರಿಂದ ಹಣ ಹಾಗೂ ಚಿನ್ನ ಪಡೆದುಕೊಂಡಿದ್ದಲ್ಲದೆ, ಐಷಾರಾಮಿ ಕಾರುಗಳನ್ನು ಓಡಾಟಕ್ಕಾಗಿ ಪಡೆದು ಬಳಿಕ ಮತ್ತೊಬ್ಬರಿಗೆ ಮಾರಾಟ ಮಾಡುತ್ತಿದ್ದ ಆರೋಪವೂ ಕೇಳಿಬಂದಿದೆ.

ಈಕೆಯಿಂದ 25ಕ್ಕೂ ಅಧಿಕ ಮಂದಿ ಕೋಟ್ಯಾಂತರ ರೂಪಾಯಿ ವಂಚನೆಗೊಳಗಾಗಿದ್ದಾರೆ ಎನ್ನಲಾಗಿದ್ದು, ಮೋಸಹೋದ 20ಕ್ಕೂ ಅಧಿಕ ಮಂದಿ ಬಸವನಹಳ್ಳಿ ಹಾಗೂ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ್ದಾರೆ.

ಬಂಧಿತ ನಿವೇದಿತಾಳ ಮೊಬೈಲ್ ಪರಿಶೀಲನೆ ವೇಳೆ ಬೇರೆ ಬೇರೆ ಹೆಸರಿನ ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಚಿಕ್ಕಮಗಳೂರು ಮಾತ್ರವಲ್ಲದೆ ಹಲವು ಜಿಲ್ಲೆಗಳಲ್ಲಿ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ವಂಚನೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ವಂಚನೆ ಮೂಲಕ ಪಡೆದ ಹಣ ಹಾಗೂ ಚಿನ್ನವನ್ನು ತನ್ನ ಪ್ರಿಯಕರ ದೇವುಗೆ ನೀಡಿರುವುದಾಗಿ ನಿವೇದಿತಾ ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾಳೆ ಎನ್ನಲಾಗಿದೆ. ಇದೀಗ ದೇವು ಬಂಧನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ನಿವೇದಿತಾಳನ್ನು ಬಂಧಿಸಿ ವಿಚಾರಣೆ ನಡೆಸಿದಿದ್ದಾರೆ.

Join WhatsApp

Join Now

Join Telegram

Join Now

और पढ़ें