🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ರೈತರ ಹೋರಾಟಕ್ಕೆ ಮಣಿದ ಸರ್ಕಾರ: ವಿವಾದಿತ ಇ-ಸ್ವತ್ತು ಸುತ್ತೋಲೆಗೆ ತಡೆ, ಮಲೆನಾಡಿನ ಜನತೆಗೆ ಸದ್ಯಕ್ಕೆ ನಿರಾಳ

---Advertisement---

 

 

ಎನ್.ಆರ್. ಪುರ: ಗ್ರಾಮೀಣ ಭಾಗದ ಮನೆ ಮತ್ತು ಆಸ್ತಿಗಳ ಇ-ಸ್ವತ್ತು ದಾಖಲೆಗಳನ್ನು ಫ್ರೀಜ್ ಮಾಡುವ ಪಂಚಾಯತ್ ರಾಜ್ ಇಲಾಖೆಯ ಆದೇಶದ ವಿರುದ್ಧ ಎನ್.ಆರ್.ಪುರದಲ್ಲಿ ರೈತರು ನಡೆಸಿದ ತೀವ್ರ ಪ್ರತಿಭಟನೆಗೆ ಕೊನೆಗೂ ಸರ್ಕಾರ ಮಣಿದಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನರಸಿಂಹರಾಜಪುರ ತಾಲೂಕು ಕಚೇರಿ ಮುಂಭಾಗ ವಿವಿಧ ರೈತ ಮತ್ತು ನಾಗರಿಕ ಸಂಘಟನೆಗಳು ಒಗ್ಗೂಡಿ ನಡೆಸಿದ ಅಹೋರಾತ್ರಿ ಧರಣಿ ಸತ್ಯಾಗ್ರಹವು ಆಡಳಿತ ಯಂತ್ರವನ್ನು ಎಚ್ಚರಿಸುವಲ್ಲಿ ಯಶಸ್ವಿಯಾಗಿದೆ.

ಆಗಸ್ಟ್ 13ರಂದು ಹೊರಡಿಸಲಾಗಿದ್ದ ಸುತ್ತೋಲೆಯು ಮೂಲ ದಾಖಲೆಗಳಿಲ್ಲದ ಸಾವಿರಾರು ಕುಟುಂಬಗಳ ಆಸ್ತಿ ಹಕ್ಕು ಮತ್ತು ತೆರಿಗೆ ಪಾವತಿಗೆ ಕಂಟಕ ತಂದಿಟ್ಟಿತ್ತು. ಅಧಿಕಾರಿಗಳು ಸ್ಥಳಕ್ಕೆ ಬಂದು ಲಿಖಿತ ಭರವಸೆ ನೀಡುವವರೆಗೂ ಜಾಗ ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಹೋರಾಟ ತೀವ್ರಗೊಳಿಸಿದ ಬೆನ್ನಲ್ಲೇ, ಪಂಚಾಯತ್ ರಾಜ್ ಆಯುಕ್ತಾಲಯವು ವಿವಾದಿತ ಇ-ಸ್ವತ್ತು 2.0 ಪ್ರಕ್ರಿಯೆಗೆ ಮುಂದಿನ ಆದೇಶದವರೆಗೆ ತಡೆ ನೀಡಿ ಆದೇಶಿಸಿದೆ.

ಇದರೊಂದಿಗೆ, ತಾಲೂಕಿನ ಯಾವುದೇ ಪಂಚಾಯಿತಿಯಲ್ಲಿ ಆಸ್ತಿ ತೆರಿಗೆ ಸ್ವೀಕರಿಸುವುದನ್ನು ನಿಲ್ಲಿಸುವುದಿಲ್ಲ ಮತ್ತು ಚಾಲ್ತಿಯಲ್ಲಿರುವ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಯಿಂದ ಕೈಬಿಡುವುದಿಲ್ಲ ಎಂದು ಎನ್.ಆರ್.ಪುರ ತಾಲೂಕು ಪಂಚಾಯಿತಿ ಇಒ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಅಂತಿಮ ತೀರ್ಮಾನ ಬರುವವರೆಗೆ ಪ್ರಸ್ತುತ ಯಥಾಸ್ಥಿತಿ ಮುಂದುವರಿಯಲಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರದ ಈ ಕ್ರಮದಿಂದಾಗಿ ಕಳೆದ ಕೆಲ ದಿನಗಳಿಂದ ಕಂಗಾಲಾಗಿದ್ದ ಮಲೆನಾಡಿನ ರೈತರು ಹಾಗೂ ಸಾರ್ವಜನಿಕರು ನಿರಾಳರಾಗಿದ್ದಾರೆ.

Join WhatsApp

Join Now

Join Telegram

Join Now

और पढ़ें