ಎಐ ಭರಾಟೆಯ ನಡುವೆ ಮಾನವೀಯತೆ ಮರೆಯಬಾರದು – ಶಾಸಕ ಎಚ್.ಡಿ. ತಮ್ಮಯ್ಯ

Spread the love

 

 

ಚಿಕ್ಕಮಗಳೂರು: ಕೃತಕ ಬುದ್ಧಿಮತ್ತೆ (ಎಐ) ಯ ಭರಾಟೆಯ ನಡುವೆಯೂ ಯುವಜನತೆ ಮಾನವೀಯ ಮೌಲ್ಯಗಳನ್ನು ಮರೆಯಬಾರದು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಕಿವಿಮಾತು ಹೇಳಿದರು.

ನಗರದ ಡಿ.ಸಿ.ಸಿ ಬ್ಯಾಂಕ್ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಿದ್ದ ಎರಡು ದಿನಗಳ “ಹೊನ್ನ ಬಿತ್ತೇವು ಹೊಲಕೆಲ್ಲ” ಸಂಘಟನೆಯ ನವ ಮಾಧ್ಯಮಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಒಳ್ಳೆಯದಕ್ಕೂ ಕೆಟ್ಟದಕ್ಕೂ ಎಐ ಬಳಕೆಯಾಗುತ್ತಿರುವುದು ಸತ್ಯ. ಮಾಧ್ಯಮ ಲೋಕದಲ್ಲಿ ವೇಗವಾದ ಬದಲಾವಣೆಗಳು ನಡೆಯುತ್ತಿವೆ. ಆದರೆ ಸತ್ಯಾಸತ್ಯತೆ ಮರೆಮಾಚುವಂತಾಗಬಾರದು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಮಾಜಿ ರಾಜ್ಯಾಧ್ಯಕ್ಷ ಎನ್. ರಾಜು ವಹಿಸಿದ್ದರು. ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಎಚ್.ಹೆಚ್. ದೇವರಾಜ್, ಐಐಪಿ ಸಂಸ್ಥಾಪಕ ನಂಜೇಶ್ ಬೆಣ್ಣೂರು, ರೈತ ಮುಖಂಡ ಗುರುಶಾಂತಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ ಕಡಿತದ ಸಾಧಕ-ಬಾಧಕಗಳು ಹಾಗೂ ಪರಿಹಾರೋಪಾಯಗಳ ಕುರಿತು ನಂಜೇಶ್ ಬೆಣ್ಣೂರು ವಿಷಯ ಮಂಡಿಸಿದರು.

ಇದಲ್ಲದೆ, “ಜೆನ್-ಜಿ ಹೊಸ ತಲೆಮಾರಿನ ಪಲ್ಲಟಗಳು, ಅಂತರ್ಜಾಲದ ದುರುಪಯೋಗ ಹಾಗೂ ಪರಿಹಾರ” ವಿಷಯವಾಗಿ ಹಾಸನದ ನವ್ಕಿಸ್ ಇಂಜಿನಿಯರಿಂಗ್ ಕಾಲೇಜಿನ ಎಐ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ವಿವೇಕಾನಂದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

 

Leave a Reply

Your email address will not be published. Required fields are marked *