ನರಸಿಂಹರಾಜಪುರ ತಾಲೂಕಿನ ಶೆಟ್ಟಿಕೊಪ್ಪ ಗ್ರಾಮದ ಬಳಿ ಅಪಘಾತವೊಂದು ಸಂಭವಿಸಿದ್ದು, ಅತಿ ವೇಗವಾಗಿ ಬಂದ ಪಿಕಪ್ ವಾಹನವೊಂದು ರಸ್ತೆಯ ಪಕ್ಕದ ಮನೆಯ ಕಾಂಪೌಂಡ್‌ಗೆ ಗುದ್ದಿ ಪಲ್ಟಿಯಾಗಿದೆ. ಎನ್.ಆರ್.ಪುರ ಕಡೆಯಿಂದ ಬಂದ ಈ ವಾಹನದ ಚಾಲಕನಿಗೆ ವೇಗದ ಮೇಲೆ ನಿಯಂತ್ರಣ ತಪ್ಪಿದ್ದೇ ಈ ಘಟನೆಗೆ ಪ್ರಮುಖ ಕಾರಣವಾಗಿದ್ದು, ಡಿಕ್ಕಿಯ ರಭಸಕ್ಕೆ ಮನೆಯ ಮುಂಭಾಗದ ಗೇಟ್ ಹಾಗೂ ಕಾಂಪೌಂಡ್ ಸಂಪೂರ್ಣವಾಗಿ ಜಖಂಗೊಂಡಿದೆ. ಅದೃಷ್ಟವಶಾತ್ ವಾಹನದಲ್ಲಿದ್ದ ಇಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತದ ಸಮಯದಲ್ಲಿ ರಸ್ತೆಯಲ್ಲಿ ಯಾರೂ ಇಲ್ಲದ ಕಾರಣ ಭೀಕರ ದುರಂತವೊಂದು ತಪ್ಪಿದಂತಾಗಿದೆ. ಪಿಕಪ್ ವಾಹನವು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಸ್ಥಳೀಯರು ಅಪಘಾತದ ತೀವ್ರತೆಯನ್ನು ಕಂಡು ದಂಗಾಗಿದ್ದಾರೆ.















Leave a Reply