ಮಲೆನಾಡಲ್ಲಿ ಅಬ್ಬರಿಸಿದ ವರುಣ ವರ್ಷದ ಮೊದಲ ಮಳೆ

Spread the love
Spread the love

 

 

ಚಿಕ್ಕಮಗಳೂರು: ಕಳೆದ ಕೆಲವು ದಿನಗಳಿಂದ ಸೂರ್ಯನ ಶಾಖಕ್ಕೆ ಕಾದ ಕಾವಲಿಯಂತಾಗಿದ್ದ ಮಲೆನಾಡಿಗೆ ಕೊನೆಗೂ ಮಳೆರಾಯ ತಂಪೆರೆದಿದೆ. ಆಲ್ದೂರು ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ವರ್ಷದ ಮೊದಲ ಮಳೆಯ ಸಿಂಚನವಾಗಿದ್ದು, ಮಲೆನಾಡಿಗರ ಬಹುದಿನಗಳ ಕಾಯುವಿಕೆ ಅಂತ್ಯವಾಗಿದೆ.

ತೀವ್ರ ಸೆಕೆ ಮತ್ತು ಬಿಸಿಲಿನಿಂದ ಕಂಗೆಟ್ಟಿದ್ದ ಮಲೆನಾಡಿನ ಜನತೆಗೆ ಈ ಮಳೆ ಹೊಸ ಚೈತನ್ಯ ನೀಡಿದೆ. ಶತಭಿಷ ಮಳೆಯ ಹನಿಗಳು ಒಣಗಿದ್ದ ಮಣ್ಣಿಗೆ ಮುತ್ತಿಡುತ್ತಿದ್ದಂತೆ ಮಣ್ಣಿನ ಸುವಾಸನೆಯು ಮಲೆನಾಡಿನ ಸೊಬಗನ್ನು ಇಮ್ಮಡಿಗೊಳಿಸಿದೆ. ಧೂಳಿನಿಂದ ಮುಚ್ಚಿಹೋಗಿದ್ದ ಬಾಡುತ್ತಿದ್ದ ಗಿಡ-ಮರಗಳಿಗೆ ಹೊಸ ಚೈತನ್ಯ ನೀಡಿದೆ. ಈ ಮಳೆ ಕೇವಲ ತಂಪು ನೀಡಿದ್ದಷ್ಟೇ ಅಲ್ಲದೆ, ಕಾಫಿ ಬೆಳೆಗಾರರ ಪಾಲಿಗೆ ಆಪದ್ಬಾಂಧವನಂತೆ ಬಂದಿದೆ. ಕಾಫಿ ಹೂವುಗಳು ಅರಳುವ ಈ ನಿರ್ಣಾಯಕ ಸಮಯದಲ್ಲಿ ಮಳೆಯ ಅನಿವಾರ್ಯತೆ ಇತ್ತು. ಇದೀಗ ಸುರಿದಿರುವ ಈ ‘ಹೂಮಳೆ’ ಕಾಫಿ ಫಸಲು ಉತ್ತಮವಾಗಿ ಬರಲು ನಾಂದಿ ಹಾಡಿದೆ. “ಬಿಸಿಲಿನ ತಾಪಕ್ಕೆ ಕಾಫಿ ಗಿಡಗಳು ಬಾಡುತ್ತಿದ್ದವು, ಈಗ ಮಳೆ ಬಂದಿರುವುದು ನಮ್ಮಲ್ಲಿ ಹೊಸ ಭರವಸೆ ಮೂಡಿಸಿದೆ” ಎಂದು ಬೆಳೆಗಾರರು ನೆಮ್ಮದಿ ವ್ಯಕ್ತಪಡಿಸಿದ್ದಾರೆ. ಮೊದಲ ಮಳೆಯ ಈ ಸಡಗರ ಮಲೆನಾಡಿನ ಜೀವಸಂಕುಲಕ್ಕೆ ಹೊಸ ಜೀವ ತುಂಬಿದೆ.

Leave a Reply

Your email address will not be published. Required fields are marked *