ಪರಿಹಾರ ನೀಡದ ಕೆಎಸ್‌ಆರ್‌ಟಿಸಿಗೆ ಕೋರ್ಟ್ ಶಾಕ್: ಎರಡು ಬಸ್‌ಗಳು ಜಪ್ತಿ!

Spread the love

 

 

ಚಿಕ್ಕಮಗಳೂರು: ಅಪಘಾತದ ಪರಿಹಾರ ಧನ ಪಾವತಿಸಲು ವಿಫಲವಾದ ಚಿಕ್ಕಮಗಳೂರು ವಿಭಾಗದ ಕೆಎಸ್‌ಆರ್‌ಟಿಸಿ ಸಂಸ್ಥೆಗೆ ನ್ಯಾಯಾಲಯವು ಬಿಸಿ ಮುಟ್ಟಿಸಿದೆ. ಕೋರ್ಟ್ ಆದೇಶದಂತೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳನ್ನು ವಕೀಲರ ತಂಡ ಜಪ್ತಿ ಮಾಡಿದೆ.

ಹಿಂದೆ ನಡೆದಿದ್ದ ಅಪಘಾತವೊಂದಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ನಾಗರತ್ನಮ್ಮ ಎಂಬುವವರಿಗೆ ₹12,41,225 ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಸಾರಿಗೆ ಸಂಸ್ಥೆಯು ಹಣ ಪಾವತಿಸಲು ನಿರ್ಲಕ್ಷ್ಯ ತೋರಿದ ಕಾರಣ, ಚನ್ನರಾಯಪಟ್ಟಣದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬಸ್ ಜಪ್ತಿಗೆ ವಾರಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಒಂದು ಬಸ್ ಹಾಗೂ ಸಕಲೇಶಪುರ ಡಿಪೋದ ಮತ್ತೊಂದು ಬಸ್ಸನ್ನು ಮಾರ್ಗಮಧ್ಯೆಯೇ ತಡೆದ ವಕೀಲರು, ಅವುಗಳನ್ನು ವಶಕ್ಕೆ ಪಡೆದು ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದಾರೆ.

ಯಾವುದೇ ಮುನ್ಸೂಚನೆ ಇಲ್ಲದೆ ರಸ್ತೆ ಮಧ್ಯೆಯೇ ಬಸ್‌ಗಳನ್ನು ಸೀಜ್ ಮಾಡಿದ್ದರಿಂದ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದರು. ಅರ್ಧ ಹಾದಿಯಲ್ಲೇ ಕೆಳಗಿಳಿಯಬೇಕಾದ ಪರಿಸ್ಥಿತಿ ಬಂದಿದ್ದರಿಂದ ಪ್ರಯಾಣಿಕರು ಸಾರಿಗೆ ಸಂಸ್ಥೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *