ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ತಿಲಕ್ ರಸ್ತೆಯಲ್ಲಿ ಇಂದು ಮುಂಜಾನೆ ‘ಹಿಟ್ ಅಂಡ್ ರನ್’ ಘಟನೆ ನಡೆದಿದೆ. ಎಂದಿನಂತೆ ಮುಂಜಾನೆ ವಾಕಿಂಗ್ಗೆ ತೆರಳಿದ್ದ 67 ವರ್ಷದ ಈಶ್ವರ ಎಂಬುವವರಿಗೆ ಅಪರಿಚಿತ ವಾಹನವೊಂದು ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಈಶ್ವರ ಅವರು ರಸ್ತೆಯಲ್ಲೇ ಬಿದ್ದಿದ್ದು, ಅಪರಿಚಿತ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ರಸ್ತೆಯಲ್ಲಿ ತೀವ್ರವಾಗಿ ಗಾಯಗೊಂಡು ನರಳುತ್ತಿದ್ದ ವೃದ್ಧನನ್ನು ಗಮನಿಸಿದ ಸ್ಥಳೀಯ ಶಿಕ್ಷಕರೊಬ್ಬರು ತಕ್ಷಣವೇ ಮಾನವೀಯತೆ ಮೆರೆದಿದ್ದಾರೆ. ಆಟೋ ಚಾಲಕನ ನೆರವಿನೊಂದಿಗೆ ಗಾಯಾಳುವನ್ನು ಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಈಶ್ವರ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದು, ಸದ್ಯ ಅವರನ್ನು ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ
















Leave a Reply