ಡ್ರಿಪ್ಸ್ ಹಾಕಿಸಿಕೊಂಡೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿ

Spread the love

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‌ನಲ್ಲಿ ಮನಕಲಕುವ ಘಟನೆ ನಡೆದಿದೆ. ಅನಾರೋಗ್ಯದ ನಡುವೆಯೇ ವಿದ್ಯಾರ್ಥಿಯೊಬ್ಬ ಡ್ರಿಪ್ಸ್ ಹಾಕಿಸಿಕೊಂಡೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಘಟನೆ ಎಲ್ಲರ ಗಮನ ಸೆಳೆದಿದೆ.

ಬಣಕಲ್ ಪ್ರೌಢ ಶಾಲೆಯ ವಿದ್ಯಾರ್ಥಿ ಗಗನ್ ಬೆಳಿಗ್ಗೆ ಪರೀಕ್ಷಾ ಕೇಂದ್ರದಲ್ಲೇ ಅಸ್ವಸ್ಥಗೊಂಡಿದ್ದಾನೆ. ತಕ್ಷಣವೇ ಶಿಕ್ಷಕರು ಆತನನ್ನು ಅಂಬುಲೆನ್ಸ್ ಮೂಲಕ ಬಣಕಲ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರು ಗಗನ್‌ಗೆ ಗ್ಲುಕೋಸ್ ಡ್ರಿಪ್ಸ್ ಹಾಕಿ ಚಿಕಿತ್ಸೆ ನೀಡಿದರು. ನಂತರ ವೈದ್ಯರ ಸಲಹೆ ಮೇರೆಗೆ ಗಗನ್ ಮತ್ತೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಸಮಾಜಶಾಸ್ತ್ರ ವಿಷಯದ ಪರೀಕ್ಷೆಯನ್ನು ಬರೆದಿದ್ದಾನೆ.

ಪರೀಕ್ಷೆ ಮುಗಿದ ಬಳಿಕ, ಶಿಕ್ಷಕರು ಮತ್ತೊಮ್ಮೆ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಮುಂದುವರಿಸಿದರು.

ಅನಾರೋಗ್ಯದಲ್ಲಿಯೇ ಪರೀಕ್ಷೆ ಬರೆದ ಗಗನ್‌ನ ಹಠ ಮತ್ತು ಶಿಕ್ಷಣದ ಮೇಲಿನ ಆಸಕ್ತಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.

Leave a Reply

Your email address will not be published. Required fields are marked *