🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಚಿಕ್ಕಮಗಳೂರು: ವಿದ್ಯುತ್ ವಾಟರ್ ಹೀಟರ್‌ನಿಂದ ಅವಘಡ – ವಿದ್ಯುತ್ ಶಾಕ್‌ಗೆ 8 ವರ್ಷದ ಬಾಲಕ ಬಲಿ!

---Advertisement---

 

ಚಿಕ್ಕಮಗಳೂರು: ಸ್ನಾನ ಮಾಡಲು ಬಾತ್‌ರೂಮ್‌ಗೆ ತೆರಳಿದ್ದ 8 ವರ್ಷದ ಬಾಲಕನೊಬ್ಬ ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟಿರುವ ದಾರುಣ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.

ಸಖರಾಯಪಟ್ಟಣದ ನೀಲಾಂಶ್ (8) ಮೃತಪಟ್ಟ ಬಾಲಕ. ಈತ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.

ಭಾನುವಾರದ ರಜೆಯ ಹಿನ್ನೆಲೆಯಲ್ಲಿ ಮನೆಯಲ್ಲೇ ಇದ್ದ ಬಾಲಕ ಸ್ನಾನ ಮಾಡಲು ಬಾತ್‌ರೂಮ್‌ಗೆ ತೆರಳಿದ್ದಾನೆ. ಈ ವೇಳೆ ನೀರು ಕಾಯಿಸಲು ಬಕೆಟ್‌ನಲ್ಲಿ ವಿದ್ಯುತ್ ವಾಟರ್ ಹೀಟರ್ ಹಾಕಲಾಗಿತ್ತು. ಹೀಟರ್‌ನಿಂದ ಬಿಸಿಯಾಗುತ್ತಿದ್ದ ನೀರಿಗೆ ಬಾಲಕ ಕೈ ಹಾಕಿದಾಗ ವಿದ್ಯುತ್ ಪ್ರವಹಿಸಿ ತೀವ್ರ ಆಘಾತಕ್ಕೊಳಗಾಗಿದ್ದಾನೆ ಎನ್ನಲಾಗಿದೆ.

ಕೂಡಲೇ ಬಾಲಕನನ್ನು ರಕ್ಷಿಸಲು ಪ್ರಯತ್ನಿಸಿದರೂ ಆತ ಮೃತಪಟ್ಟಿದ್ದಾನೆ. ಪುಟ್ಟ ಬಾಲಕನ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ಮುಂದಿನ ಕ್ರಮ ಕೈಗೊಂಡಿದ್ದಾರೆ.