🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಮಳೆ ಇಲ್ಲದೆ ಬೆಳೆ ನಾಶ; ಸಾಲಬಾಧೆಗೆ ಕಂಗಾಲಾಗಿ ಇಬ್ಬರು ರೈತರು ಆತ್ಮಹತ್ಯೆ

---Advertisement---

HIGHLIGHTS

 

 

ಕಡೂರು ತಾಲೂಕಿನಲ್ಲಿ ಮಳೆಯಿಲ್ಲದೆ ಕೃಷಿ ನಷ್ಟ ಅನುಭವಿಸಿದ ಇಬ್ಬರು ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಗಳು ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿವೆ.

ಭೈರಗೊಂಡನಹಳ್ಳಿ ಗ್ರಾಮದ 44 ವರ್ಷದ ರೈತ ಬಸವರಾಜ ಎಂಬುವವರು ತಮ್ಮ ಮೂರೂವರೆ ಎಕರೆ ತೋಟ ಹಾಗೂ ಜಮೀನಿನ ಕೃಷಿ ವೆಚ್ಚಕ್ಕಾಗಿ ವಿವಿಧ ಬ್ಯಾಂಕ್‌ಗಳು ಮತ್ತು ಸ್ತ್ರೀಶಕ್ತಿ ಸಂಘಗಳಿಂದ ಸುಮಾರು 4.80 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಮಳೆ ಕೈಕೊಟ್ಟ ಕಾರಣ ತೀವ್ರ ಬೆಳೆ ನಷ್ಟ ಉಂಟಾಗಿ ಸಾಲ ತೀರಿಸಲಾಗದೆ ಕಂಗಾಲಾಗಿದ್ದ ಅವರು, ಅಕ್ಟೋಬರ್ 3ರಿಂದ ನಾಪತ್ತೆಯಾಗಿದ್ದರು. ಬಳಿಕ ಗ್ರಾಮದ ಸಮೀಪದ ಅರಣ್ಯ ಇಲಾಖೆಯ ಪ್ಲಾಂಟೇಶನ್‌ನ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಪುತ್ರ ಜೀವನ್ ಪೊಲೀಸರಿಗೆ ದೂರು ನೀಡಿದ್ದಾರೆ.

ಮತ್ತೊಂದು ಘಟನೆಯಲ್ಲಿ, ಕೊತ್ತಿಗೆರೆ ಗ್ರಾಮದ 60 ವರ್ಷದ ರೈತ ಶಂಕರಯ್ಯ ಎಂಬುವವರು ತಮ್ಮ ಮೂರು ಎಕರೆ ಜಮೀನಿನ ಕೆಲಸಕ್ಕಾಗಿ ಖಾಸಗಿ ಫೈನಾನ್ಸ್ ಮೂಲಕ 4 ಲಕ್ಷಕ್ಕೂ ಅಧಿಕ ರೂಪಾಯಿ ಸಾಲ ಪಡೆದು ಟ್ರ್ಯಾಕ್ಟರ್ ಖರೀದಿಸಿದ್ದರು. ಆರಂಭದಲ್ಲಿ ಎರಡು ಕಂತುಗಳನ್ನು ಕಟ್ಟಿದ್ದರೂ, ಈ ಬಾರಿ ಮಳೆ ಬಾರದೆ ಬೆಳೆ ಕೈಸೇರದ ಕಾರಣ ಬಾಕಿ ಹಣ ಪಾವತಿಸಲು ಸಾಧ್ಯವಾಗದೆ ಮಾನಸಿಕವಾಗಿ ತೀವ್ರ ಆತಂಕಕ್ಕೊಳಗಾಗಿದ್ದರು. ಸಾಲದ ಬಾಧೆ ತಾಳಲಾರದೆ ಅಕ್ಟೋಬರ್ 5ರ ರಾತ್ರಿ ತೋಟದ ಮನೆಯ ಶೆಡ್‌ನಲ್ಲಿ ವಿಷ ಸೇವಿಸಿದ್ದ ಅವರನ್ನು ತಕ್ಷಣ ಕಡೂರು ಹಾಗೂ ಚಿಕ್ಕಮಗಳೂರಿನ ಮಲ್ಲೇಗೌಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 6ರ ಸಂಜೆ ಅವರು ಮೃತಪಟ್ಟಿರುವುದಾಗಿ ಮಗ ಸತೀಶ್ ತಿಳಿಸಿದ್ದಾರೆ. ಈ ಎರಡೂ ದುರಂತಗಳಿಗೆ ಸಂಬಂಧಿಸಿದಂತೆ ಯಗಟಿ ಠಾಣೆಯ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Join WhatsApp

Join Now

Join Telegram

Join Now