🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ತುಂಗಾ ನದಿಯಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

---Advertisement---

 

​ಚಿಕ್ಕಮಗಳೂರು: ಶೃಂಗೇರಿ ಪವಿತ್ರ ಕ್ಷೇತ್ರದಲ್ಲೊಂದು ದುರ್ಘಟನೆ ನಡೆದಿದ್ದು, ನವರಾತ್ರಿ ಪೂಜೆಗಾಗಿ ಪೋಷಕರೊಂದಿಗೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತುಂಗಾ ನದಿಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ.

​ಕೋಲಾರ ಜಿಲ್ಲೆಯ ಮಾಲೂರು ಮೂಲದ ರಾಘವೇಂದ್ರ ಪೂಜಾರಿ (20) ಮೃತಪಟ್ಟ ದುರ್ದೈವಿ. ಈ ಯುವಕ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದನು.

ಕುಟುಂಬ ಸಮೇತ ಶೃಂಗೇರಿಗೆ ನವರಾತ್ರಿ ಪೂಜೆಗಾಗಿ ಆಗಮಿಸಿದ್ದ ರಾಘವೇಂದ್ರ ಪೂಜಾರಿ, ಶೃಂಗೇರಿಯ ತುಂಗಾ ನದಿಯ ಪಾರ್ಕಿಂಗ್ ಲಾಟ್ ಬಳಿ ತೆರಳಿದ್ದರು. ನದಿಯಿಂದ ವಾಪಸ್ ಬರುತ್ತಿದ್ದ ಯುವಕ, ಅನಿರೀಕ್ಷಿತವಾಗಿ ಮತ್ತೆ ನೀರಿನೊಳಗೆ ಇಳಿದಿದ್ದು, ಈ ವೇಳೆ ಆಳಕ್ಕೆ ಸಿಲುಕಿ ಮುಳುಗಿದ್ದಾನೆ. ನದಿಯಲ್ಲಿದ್ದ ಮತ್ತೊಬ್ಬ ಮಹಿಳೆ ಇದನ್ನು ಗಮನಿಸಿ ಜೋರಾಗಿ ಕಿರುಚಿಕೊಂಡರಾದರೂ, ಸ್ಥಳೀಯರು ರಕ್ಷಿಸುವಷ್ಟರಲ್ಲಿ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ತುಂಗಾ ನದಿಯ ಈ ನಿರ್ದಿಷ್ಟ ಜಾಗದಲ್ಲಿ ಈಗಾಗಲೇ ಹಲವು ಮಂದಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಎಚ್ಚೆತ್ತುಕೊಳ್ಳದ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಮುನ್ನೆಚ್ಚರಿಕೆ ಕ್ರಮವಾಗಿ ನದಿ ತೀರದಲ್ಲಿ ನಾಮಫಲಕಗಳನ್ನು ಅಳವಡಿಸಬೇಕು ಅಥವಾ ಫೆನ್ಸಿಂಗ್ (ಬೇಲಿ) ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಶೃಂಗೇರಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿ ನೀರಿನ ಆಳದಲ್ಲಿ ಮೃತದೇಹವನ್ನು ಪತ್ತೆ ಹಚ್ಚಲು ಮಲ್ಪೆಯ ಖ್ಯಾತ ಈಶ್ವರ್ ಅವರ ಮುಳುಗು ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸುತ್ತಿದೆ.

Join WhatsApp

Join Now

Join Telegram

Join Now

और पढ़ें