मौसम क्रिकेट ऑपरेशन सिंदूर क्रिकेट स्पोर्ट्स बॉलीवुड जॉब - एजुकेशन बिजनेस लाइफस्टाइल देश विदेश राशिफल आध्यात्मिक अन्य
---Advertisement---

ಆಕ್ಷೇಪಣೆ ಸಾಲದು, ಕೇರಳ ಮಾದರಿಯಲ್ಲಿ ವೈಜ್ಞಾನಿಕ ವರದಿ ಸಲ್ಲಿಸಿ: ಸರ್ಕಾರಕ್ಕೆ ಹೊಲದಗದ್ದೆ ಗಿರೀಶ್ ಆಗ್ರಹ

---Advertisement---

​ಚಿಕ್ಕಮಗಳೂರು: ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ESA) ಎಂದು ಘೋಷಿಸುವ ಕರಡು ಅಧಿಸೂಚನೆಗೆ ಕೇವಲ ಆಕ್ಷೇಪಣೆ ಸಲ್ಲಿಸುವುದಕ್ಕೆ ಸೀಮಿತವಾಗದೆ, ಕೇರಳ ಮಾದರಿಯಲ್ಲಿ ವೈಜ್ಞಾನಿಕ ವರದಿಯನ್ನ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಹೊಲದಗದ್ದೆ ಗಿರೀಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

​ವಿಧಾನಸಭೆಯಲ್ಲಿ ಕರಡು ಅಧಿಸೂಚನೆ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಸರ್ಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ. ಆದರೆ, ಯಾವುದೇ ತಿದ್ದುಪಡಿ ಇಲ್ಲದೆ ಹಳೆಯ ಅಧಿಸೂಚನೆಗಳೇ ಮರುಪ್ರಕಟಗೊಳ್ಳುತ್ತಿರುವುದರಿಂದ, ಸರ್ಕಾರವು ಉಪಗ್ರಹ ಆಧಾರಿತ ಸರ್ವೇ ಹಾಗೂ ಸ್ಥಳೀಯ ಪರಿಶೀಲನೆಯೊಂದಿಗೆ ಸ್ಪಷ್ಟ ವರದಿ ತಯಾರಿಸಬೇಕಿದೆ.

​ವೈಜ್ಞಾನಿಕ ವರದಿಯ ಅಗತ್ಯ: ಕೇರಳ ಸರ್ಕಾರವು ನೈಜ ವಾಸಸ್ಥಳ, ಅರಣ್ಯ ಪ್ರದೇಶ ಹಾಗೂ ಕೃಷಿ ಭೂಮಿಯನ್ನು ಪ್ರತ್ಯೇಕಿಸಿ ನೀಡಿದ ವರದಿಯಿಂದಾಗಿ ಅಲ್ಲಿನ ಹಲವು ಗ್ರಾಮಗಳನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ. ಅದೇ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಬೇಕು.

​ಬಫರ್ ಝೋನ್ ಭೀತಿ: ಪರಿಸರ ಸೂಕ್ಷ್ಮ ವಲಯದ ಸುತ್ತ 10 ಕಿ.ಮೀ.ವರೆಗೆ ಬಫರ್ ಝೋನ್ ನಿಗದಿಯಾದರೆ ಚಿಕ್ಕಮಗಳೂರು ನಗರ ಸೇರಿದಂತೆ ರಾಜ್ಯದ 10 ಜಿಲ್ಲೆಗಳ 37 ತಾಲೂಕಿನ ನೂರಾರು ಹಳ್ಳಿಗಳ ಜನತೆ తీవ్ర ಸಮಸ್ಯೆಗೆ ಸಿಲುಕಲಿದ್ದಾರೆ.

​ಸಮಯದ ಅಭಾವ: ಆಕ್ಷೇಪಣೆ ಸಲ್ಲಿಸಲು ನೀಡಲಾದ 60 ದಿನಗಳಲ್ಲಿ ಈಗಾಗಲೇ 25 ದಿನ ಕಳೆದಿವೆ.

​ರಾಜಕೀಯ ಗದ್ದಲಕ್ಕೆ ವಿರಾಮ ನೀಡಿ: ಶಾಸಕರು ಸದನದಲ್ಲಿ ರಾಜಕೀಯ ಗದ್ದಲ ಮಾಡುವುದನ್ನು ಬಿಟ್ಟು ಒಗ್ಗಟ್ಟಿನಿಂದ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಹಾಗೂ ಸಂಸದರು ಲೋಕಸಭೆಯಲ್ಲಿ ಧ್ವನಿ ಎತ್ತಬೇಕು.

Join WhatsApp

Join Now

Join Telegram

Join Now

Leave a Comment