🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಸೋಲಾರ್ ಬೇಲಿ ಧ್ವಂಸಗೊಳಿಸಿ ತೋಟಕ್ಕೆ ನುಗ್ಗಿದ ಕಾಡಾನೆ!

---Advertisement---

 

 

ಚಿಕ್ಕಮಗಳೂರು: ಸೋಲಾರ್ ಬೇಲಿಯೂ ಶಾಕ್ ಹೊಡೆದರೂ ಕಿಂಚಿತ್ತೂ ಕ್ಯಾರೆ ಎನ್ನದ ದೈತ್ಯ ಒಂಟಿಸಲಗವೊಂದು ಸೋಲಾರ್ ಬೇಲಿಯನ್ನು ಪುಡಿಪುಡಿ ಮಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟಿರುವ ಬೆಚ್ಚಿಬೀಳಿಸುವ ಘಟನೆ ಮಲೆನಾಡು ಭಾಗದಲ್ಲಿ ನಡೆದಿದೆ. ಚಿಕ್ಕಮಗಳೂರು–ಶೃಂಗೇರಿ ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆಯಲ್ಲಿ ಪ್ರತ್ಯಕ್ಷವಾದ ಈ ಕಾಡಾನೆ ವಾಹನ ಸವಾರರು ಹಾಗೂ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

​ಮೊದಲಿಗೆ ರಸ್ತೆ ಬದಿಯ ತೋಟದ ಸೋಲಾರ್ ತಂತಿಯನ್ನು ಮುರಿಯಲು ಯತ್ನಿಸಿದಾಗ ವಿದ್ಯುತ್ ಪ್ರವಹಿಸಿ ಆನೆ ಕೊಂಚ ಹಿಂಜರಿದಿತ್ತು. ಆದರೆ ಅಷ್ಟಕ್ಕೇ ಸುಮ್ಮನಾಗದ ಗಜರಾಜ, ರಸ್ತೆಯಲ್ಲೇ ಕೆಲ ಮೀಟರ್ ಮುಂದೆ ಸಾಗಿ ಅಲ್ಲಿ ಅಳವಡಿಸಲಾಗಿದ್ದ ಸೋಲಾರ್ ಬೇಲಿಯ ಗೇಟ್ ಹಾಗೂ ತಂತಿಗಳನ್ನು ತನ್ನ ಬಲಶಾಲಿ ಸೊಂಡಿಲಿನಿಂದ ಸಲೀಸಾಗಿ ಮುರಿದು ತೋಟದೊಳಗೆ ನುಗ್ಗಿದೆ.

​ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರು ಮತ್ತು ವಾಹನ ಚಾಲಕರ ಕಣ್ಣೆದುರೇ ಈ ಘಟನೆ ನಡೆದಿದ್ದು, ಆನೆಯ ರೌದ್ರಾವತಾರ ಕಂಡು ಜನರು ಜೀವಭಯದಿಂದ ಹಿಂದಕ್ಕೆ ಓಡಿದ್ದಾರೆ. ಈ ಆತಂಕಕಾರಿ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.

Join WhatsApp

Join Now

Join Telegram

Join Now