🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ಗಲಾಟೆ; ಜೈಲರ್ ಮತ್ತು ಸಿಬ್ಬಂದಿಗೆ ಜೀವ ಬೆದರಿಕೆ!

---Advertisement---

 

 

ಚಿಕ್ಕಮಗಳೂರು : ನಗರದ ರಾಮನಹಳ್ಳಿ ಸಮೀಪದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ಗಲಾಟೆ ನಡೆದಿದ್ದು, ಜೈಲರ್ ಹಾಗೂ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ನಾಲ್ವರು ಕೈದಿಗಳ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾತ್ರಿ ಊಟದ ಸಮಯದಲ್ಲಿ ಕಾರಾಗೃಹದ ಬ್ಯಾರಕ್ ನಂಬರ್ 1ರಲ್ಲಿದ್ದ ವಿಚಾರಣಾಧೀನ ಕೈದಿಗಳ ನಡುವೆ ಗಲಾಟೆ ಆರಂಭವಾಗಿದೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಹಾಗೂ ಬ್ಯಾರಕ್ ಒಳಗೆ ತಪಾಸಣೆ ನಡೆಸಲು ತೆರಳಿದ್ದ ಜೈಲು ಅಧೀಕ್ಷಕಿ ದೀಪಾ ಮತ್ತು ಸಿಬ್ಬಂದಿಗೆ ಕೈದಿಗಳು ಜೀವ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಜೈಲು ಅಧೀಕ್ಷಕಿ ದೀಪಾ ಅವರು ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಾಗಿರುವ ನಾಲ್ವರು ಕೈದಿಗಳು:

1. ಅಹ್ಮದ್ ಖಾನ್

2. ಅಸ್ಪಾನ್ ಇರ್ಷಾದ್ ಅಹ್ಮದ್

3. ಹರ್ಷಿತ್

4. ಅವಿನಾಶ್ ದೊಂಡ್ರೇ

ದರೋಡೆ, ಕೊಲೆ ಯತ್ನ ಹಾಗೂ ಪೋಕ್ಸೋ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಈ ನಾಲ್ವರು ವಿಚಾರಣಾಧೀನ ಕೈದಿಗಳಾಗಿ ಕಾರಾಗೃಹದಲ್ಲಿದ್ದರು.

ಜೈಲು ಅಧೀಕ್ಷಕಿಯ ದೂರಿನ ಆಧಾರದ ಮೇಲೆ ಬಸವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Join WhatsApp

Join Now