मौसम क्रिकेट ऑपरेशन सिंदूर क्रिकेट स्पोर्ट्स बॉलीवुड जॉब - एजुकेशन बिजनेस लाइफस्टाइल देश विदेश राशिफल आध्यात्मिक अन्य
---Advertisement---

ಕೇಕ್ ಗೆ ಅವಧಿ ಮೀರಿದ ಸಾಸ್ ಬಳಕೆ, ಬೇಕರಿ ಸಿಬ್ಬಂದಿ ಚಳಿ ಬಿಡಿಸಿದ ಗ್ರಾಹಕ…!

---Advertisement---

ಚಿಕ್ಕಮಗಳೂರು:

ರಾಜ್ಯಾದ್ಯಂತ ಆಹಾರ ಸುರಕ್ಷತಾ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿರುವ ಬೆನ್ನಲ್ಲೇ, ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಮೂರು ದಿನಗಳ ಅಂತರದಲ್ಲಿ ಎರಡು ಆಘಾತಕಾರಿ ಘಟನೆಗಳು ಬೆಳಕಿಗೆ ಬಂದಿವೆ.

​ಮೊದಲ ಪ್ರಕರಣದಲ್ಲಿ ಕಳಸ ತಾಲೂಕಿನ ಹೊಟೇಲ್‌ ಒಂದರಲ್ಲಿ ಗ್ರಾಹಕರಿಗೆ ನೀಡಿದ ವಡೆಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಈ ಘಟನೆ ಮಾಸುವ ಮುನ್ನವೇ, ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ‘ಕೇಕ್ ಕಾರ್ನರ್’ (Cake Corner) ಎಂಬ ಪ್ರತಿಷ್ಠಿತ ಬೇಕರಿಯಲ್ಲಿ ಅವಧಿ ಮೀರಿದ (Expired) ಚಾಕ್ಲೇಟ್ ಸಾಸ್ ಬಳಸಿ ಕೇಕ್ ತಯಾರಿಸಿ ಮಾರಾಟ ಮಾಡುತ್ತಿರುವುದು ಧರ್ಮಸಂಕಟಕ್ಕೆ ಕಾರಣವಾಗಿದೆ.

​ಅವಧಿ ಮೀರಿದ ಸಾಸ್ – ಗ್ರಾಹಕನ ಆಕ್ರೋಶ:

ಚಿಕ್ಕಮಗಳೂರಿನ ಕೇಕ್ ಕಾರ್ನರ್ ಬೇಕರಿಯಲ್ಲಿ ಖರೀದಿಸಿದ ಕೇಕ್ ಸೇವಿಸಿದಾಗ ಅದು ಕಹಿಯಾಗಿರುವುದು ಪತ್ತೆಯಾಗಿದೆ. ಅನುಮಾನಗೊಂಡ ಗ್ರಾಹಕರು ಪರಿಶೀಲಿಸಿದಾಗ, ಕೇಕ್ ತಯಾರಿಕೆಗೆ ಬಳಸಿದ ಚಾಕ್ಲೇಟ್ ಸಾಸ್‌ನ ಕಾಲಾವಧಿ ಮುಗಿದು ತಿಂಗಳುಗಳೇ ಕಳೆದಿರುವುದು ಬಹಿರಂಗವಾಗಿದೆ. ಕೇಕ್ ಕೊಳೆತ ವಾಸನೆ ಬರುತ್ತಿದ್ದು, ಸಾಸ್ ಸಂಪೂರ್ಣ ಕಹಿಯಾಗಿತ್ತು.

​”ಮಕ್ಕಳು ಈ ಕೇಕ್ ತಿಂದಿದ್ದಾರೆ. ಒಂದು ವೇಳೆ ವಿಷಪೂರಿತ ಆಹಾರ ಸೇವಿಸಿ ಮಕ್ಕಳಿಗೆ ಏನಾದರೂ ಹೆಚ್ಚು-ಕಮ್ಮಿಯಾಗಿ ಆಸ್ಪತ್ರೆ ಸೇರಿದರೆ ಇದಕ್ಕೆ ಯಾರು ಜವಾಬ್ದಾರಿ? ಹಣಕ್ಕಾಗಿ ಜನರ ಆರೋಗ್ಯದ ಜೊತೆ ಈ ರೀತಿ ಆಟವಾಡಿದರೆ ಸಾರ್ವಜನಿಕರ ಸ್ಥಿತಿ ಏನು?” ಎಂದು ಗ್ರಾಹಕರು ಬೇಕರಿ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಪ್ರಶ್ನಿಸಿ ಕ್ಲಾಸ್ ತೆಗೆದುಕೊಂಡಿದ್ದಾರೆ.

​”ಅವಧಿ ಮುಗಿದು ತಿಂಗಳಾಗಿದ್ದರೂ ಇಂತಹ ಕಳಪೆ ಸಾಸ್ ಹಾಕಿ ಕೇಕ್ ಮಾಡಲು ನಿಮಗೆ ಹೇಗೆ ಮನಸ್ಸು ಬಂತು? ಈ ಕಹಿ ಕೇಕ್‌ಗೆ ನಾವು ಹಣ ಕೊಡುವುದಿಲ್ಲ, ಈ ವಿಷಯವನ್ನು ಇಲ್ಲಿಗೆ ಬಿಡುವುದಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.

​ಆಹಾರ ನೈರ್ಮಲ್ಯ ಮತ್ತು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸಂಬಂಧಪಟ್ಟ ಆಹಾರ ಸುರಕ್ಷತಾ ಅಧಿಕಾರಿಗಳು ತಕ್ಷಣವೇ ಇಂತಹ ಬೇಕರಿ   ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Join WhatsApp

Join Now

Join Telegram

Join Now

Leave a Comment