मौसम क्रिकेट ऑपरेशन सिंदूर क्रिकेट स्पोर्ट्स बॉलीवुड जॉब - एजुकेशन बिजनेस लाइफस्टाइल देश विदेश राशिफल आध्यात्मिक अन्य
---Advertisement---

ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಬೆನ್ನಲ್ಲೇ ಕುತೂಹಲ ಮೂಡಿಸಿದ ಸಂತೋಷ್ ಲಾಡ್ ಭೇಟಿ*

---Advertisement---

 

ಬೆಂಗಳೂರು, ಸೆಪ್ಟೆಂಬರ್‌ 11: ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಬೆಂಗಳೂರಿನ ನಿವಾಸಕ್ಕೆ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಸಂತೋಷ್‌ ಎಸ್‌. ಲಾಡ್‌ ಅವರು ಇಂದು ಭೇಟಿ ನೀಡಿ ಮಾತುಕತೆ ನಡೆಸಿದರು. 

ಜಾರಕಿಹೊಳಿ ಅವರ ಜೊತೆ ಹಲವು ವಿಷಯಗಳ ಕುರಿತು ಲಾಡ್‌ ಅವರು ಇದೇ ವೇಳೆ ಚರ್ಚೆ ನಡೆಸಿದರು. 

ಜಾರಕಿಹೊಳಿ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ (ಇ,ಡಿ) ಅಧಿಕಾರಿಗಳು 3 ದಿನಗಳ ಹಿಂದೆ ದಾಳಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಲಾಡ್‌ ಅವರ ಭೇಟಿ ಮಹತ್ವ ಪಡೆದಿದೆ. 

*ಜಾರಕಿಹೊಳಿಗೆ ನೈತಿಕ ಬೆಂಬಲ ಕೊಟ್ಟಿದ್ದರು ಲಾಡ್‌* 

ಜಾರಕಿಹೊಳಿ ಅವರ ನಿವಾಸಗಳ ಮೇಲೆ ಬುಧವಾರ ಇಡಿ ಅಧಿಕಾರಿಗಳು ದಾಳಿ ಮಾಡಿದ್ದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಲಾಡ್‌ ಅವರು, ಪ್ರಕರಣದಲ್ಲಿ ಸತೀಶ್‌ ಅವರು ಮುಕ್ತರಾಗಿ ಬರುತ್ತಾರೆ. ಜಾರಕಿಹೊಳಿ ಅವರ ಸಹೋದರನಾಗಿ ಅವರೊಂದಿಗೆ ಗಟ್ಟಿಯಾಗಿ ನಿಲ್ಲುತ್ತೇನೆ. ಅಲ್ಲದೆ ಇಡೀ ಕಾಂಗ್ರೆಸ್‌ ಪಕ್ಷ, ಮುಖಂಡರು ಹಾಗೂ ಲಕ್ಷಾಂತರ ಕಾರ್ಯಕರ್ತರು ಅವರ ಜೊತೆ ಇರಲಿದ್ದಾರೆ ಎಂದು ಹೇಳಿದ್ದರು.

Join WhatsApp

Join Now

Join Telegram

Join Now

Leave a Comment