ಪೈನಾನ್ಸ್ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಆಣೂರು ಪಂಚಾಯಿತಿಯ ವಾಟರ್ ಮ್ಯಾನ್ ರಮೇಶ್ (47) ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಕಳೆದ ಸುಮಾರು 10 ವರ್ಷಗಳಿಂದ ಆಣೂರು ಪಂಚಾಯಿತಿಯಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮತ್ತು ದುಃಖವನ್ನುಂಟು ಮಾಡಿದೆ.
ಮೂಲಗಳ ಪ್ರಕಾರ, ಪೈನಾನ್ಸ್ ಸಂಬಂಧಿತ ಕಿರುಕುಳದಿಂದಾಗಿ ಮನನೊಂದು ರಮೇಶ್ ಅವರು ಈ ಕಠಿಣ ನಿರ್ಧಾರಕ್ಕೆ ಕೈ ಹಾಕಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಪೊಲೀಸ್ ಇಲಾಖೆ ತನಿಖೆ ಆರಂಭಿಸಿದೆ.
















Leave a Reply