ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ವಿಶಿಷ್ಟ ರೀತಿಯ ಶಿಕ್ಷೆ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಟ್ರಾಫಿಕ್ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದ್ದ ವ್ಯಕ್ತಿಗೆ ನ್ಯಾಯಾಲಯ ಕಮ್ಯುನಿಟಿ ಸೇವೆ ಶಿಕ್ಷೆ ನೀಡಿದೆ.
ಕಡೂರು ತಾಲೂಕಿನ ಬಿಸಿಲೇಹಳ್ಳಿ ಗ್ರಾಮದ ರಂಜಿತ್ ಎಂಬಾತ ಹಲವಾರು ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ ಬಳಿಕ, ನ್ಯಾಯಾಲಯದಲ್ಲಿ ರಂಜಿತ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಇದನ್ನ ಗಮನಿಸಿದ ನ್ಯಾಯಾಲಯ, ರಂಜಿತ್ಗೆ ವಿಭಿನ್ನ ರೀತಿಯ ಶಿಕ್ಷೆ ವಿಧಿಸಿದೆ. ಮಾರ್ಚ್ 17ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕಡೂರು ಪಟ್ಟಣದ ಮರವಂಜಿ ಸರ್ಕಲ್ನಲ್ಲಿ ಕೈಯಲ್ಲಿ ಬೋರ್ಡ್ ಹಿಡಿದು ನಿಲ್ಲುವಂತೆ ಸೂಚಿಸಿದೆ. ಈ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದೇ ಶಿಕ್ಷೆಯ ಉದ್ದೇಶವಾಗಿದೆ.
ಇದಲ್ಲದೆ, ರಂಜಿತ್ ಶಿಕ್ಷೆಯನ್ನು ಸರಿಯಾಗಿ ಪಾಲಿಸುತ್ತಾನೆಯೇ ಎಂಬುದನ್ನು ಗಮನಿಸಲು ಒಬ್ಬ ಪೊಲೀಸರನ್ನು ನಿಯೋಜಿಸಲು ನ್ಯಾಯಾಲಯ ಸೂಚಿಸಿದೆ. ದಿನಪೂರ್ತಿ ನಿಂತ ಬಳಿಕ ಇದರ ಕುರಿತು ವರದಿ ಸಲ್ಲಿಸುವಂತೆ ಪೊಲೀಸರಿಗೆ ಆದೇಶ ನೀಡಲಾಗಿದೆ.













Leave a Reply