ಸಿಲ್ವರ್ ಮರ ಕಡಿಯುವಾಗ ವಿದ್ಯುತ್ ಅವಘಡ – ತಮಿಳುನಾಡು ಮೂಲದ ಕಾರ್ಮಿಕ ಸಾವು

Spread the love

 

 

ಚಿಕ್ಕಮಗಳೂರು ತಾಲೂಕಿನ ಕೆರೆಮನೆ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಮಿಳುನಾಡು ಮೂಲದ 45 ವರ್ಷದ ಆರ್ಮುಗಂ ಎಂಬುವವರೇ ಈ ದುರ್ಘಟನೆಗೆ ಬಲಿಯಾದವರು.

​ಬಾಬರ್ ಎಂಬುವರಿಗೆ ಸೇರಿದ ತೋಟದಲ್ಲಿ ಆರ್ಮುಗಂ ಅವರು ಸಿಲ್ವರ್ ಮರದ ಮರಗಸಿ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಮರ ಕಡಿಯುವಾಗ ಆಕಸ್ಮಿಕವಾಗಿ ಹತ್ತಿರದಲ್ಲೇ ಇದ್ದ ವಿದ್ಯುತ್ ಲೈನ್‌ಗೆ ಮರ ಸ್ಪರ್ಶಿಸಿದ್ದರಿಂದ ತೀವ್ರವಾಗಿ ಶಾಕ್ ತಗುಲಿದ್ದು, ಆರ್ಮುಗಂ ಅವರು ಕೊನೆಯುಸಿರೆಳೆದಿದ್ದಾರೆ.

​ಸ್ಥಳಕ್ಕೆ ಮಲ್ಲಂದೂರು ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೆಲಸಕ್ಕೆಂದು ಬಂದು ಜೀವ ಕಳೆದುಕೊಂಡ ಕಾರ್ಮಿಕನ ಸಾವಿನಿಂದಾಗಿ ಅವರ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.

Leave a Reply

Your email address will not be published. Required fields are marked *