मौसम क्रिकेट ऑपरेशन सिंदूर क्रिकेट स्पोर्ट्स बॉलीवुड जॉब - एजुकेशन बिजनेस लाइफस्टाइल देश विदेश राशिफल आध्यात्मिक अन्य
---Advertisement---

ತುಂಗಾ ನದಿಯಲ್ಲಿ ಬಿದ್ದು ಯುವಕ ಸಾವು ಪೋಟೋ ತೆಗೆಯಲು ಹೋಗಿ ನದಿಗೆ ಬಿದ್ದಿರುವ ಶಂಕೆ

---Advertisement---

ಶೃಂಗೇರಿ ತಾಲೂಕಿನ ಹಾಲಂದೂರು ಗ್ರಾಮದ ಬೆಣ್ಣೆಗುಡ್ಡದ ಬಳಿ ತುಂಗಾ ನದಿಯಲ್ಲಿ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಪ್ರತಿಕ್ (30) ಎಂದು ಗುರುತಿಸಲಾಗಿದೆ. ಪೋಟೋ ತೆಗೆಯಲು ನದಿಯ ಬಳಿ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ತುಂಗಾ ನದಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಪ್ರತಿಕ್‌ಗಾಗಿ ಶೋಧ ಕಾರ್ಯ ನಡೆಸಲಾಗಿದ್ದು, ಈಶ್ವರ್ ಮಲ್ಪೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದಾರೆ.
ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join WhatsApp

Join Now

Join Telegram

Join Now

Leave a Comment