🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ರಂಭಾಪುರಿ ಮಠದಲ್ಲಿ ನೂತನ ದೇವಾಲಯ ನಿರ್ಮಾಣಕ್ಕೆ ಸಿಎಂ ಡಿಕೆಶಿ ಶಂಕುಸ್ಥಾಪನೆ

---Advertisement---

 

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯರ ನೂತನ ದೇವಾಲಯ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಿದರು.

ಸುಮಾರು 3 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ರಂಭಾಪುರಿ ಮಠದ ಆವರಣದಲ್ಲಿ ನೂತನ ದೇವಾಲಯ ನಿರ್ಮಾಣವಾಗಲಿದ್ದು, ಸಂಪೂರ್ಣ ಕಲ್ಲಿನಿಂದಲೇ ದೇಗುಲದ ಕಟ್ಟಡವನ್ನು ನಿರ್ಮಿಸಲು ಯೋಜಿಸಲಾಗಿದೆ.

ರೇಣುಕಾಚಾರ್ಯರ ಮೂಲ ಮೂರ್ತಿ ಇರುವ ಗುಡಿಯನ್ನು ಹೊರತುಪಡಿಸಿ, ಸುಮಾರು 200 ವರ್ಷಗಳಷ್ಟು ಹಳೆಯದಾದ ಪ್ರಸ್ತುತ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಲ್ಲಿನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಮಠದ ಕಟ್ಟಡವನ್ನು ಕಾಲಕಾಲಕ್ಕೆ ಜಗದ್ಗುರುಗಳು ಹಾಗೂ ಆಡಳಿತ ಮಂಡಳಿ ನವೀಕರಿಸುತ್ತಾ ಬಂದಿವೆ.

ರಂಭಾಪುರಿ ಪೀಠವು ದೇಶದ ಐದು ಪಂಚಪೀಠಗಳಲ್ಲಿ ಮೊದಲ ಪೀಠವೆಂದು ಮಠದ ಪರಂಪರೆಯಲ್ಲಿ ಗುರುತಿಸಿಕೊಂಡಿದೆ. ಉಜ್ಜಯಿನಿ, ಕೇದಾರ, ಶ್ರೀಶೈಲ ಹಾಗೂ ಕಾಶಿ ಪೀಠಗಳಿಗೆ ರಂಭಾಪುರಿ ಪೀಠವೇ ಮೂಲ ಪೀಠ ಎಂಬ ನಂಬಿಕೆಯೂ ಇದೆ.

ನೂತನ ದೇವಾಲಯ ನಿರ್ಮಾಣದ ಮೂಲಕ ರಂಭಾಪುರಿ ಮಠದ ಧಾರ್ಮಿಕ ಹಾಗೂ ಐತಿಹಾಸಿಕ ಪರಂಪರೆಗೆ ಮತ್ತಷ್ಟು ಮೆರುಗು ಬರಲಿದೆ.

Join WhatsApp

Join Now

Join Telegram

Join Now

और पढ़ें