ಬಾರ್ ಮಾಲೀಕರಿಗೆ ನಗರಸಭೆ ಶಾಕ್: ರಸ್ತೆ ಬದಿ ಕಸ ಎಸೆದರೆ ಬಾರ್ ಸೀಜ್ ಮಾಡುವ ಎಚ್ಚರಿಕೆ

Spread the love

 

ಚಿಕ್ಕಮಗಳೂರು: ನಗರದ ಜಯನಗರ ಬಡಾವಣೆಯಲ್ಲಿರುವ ಬೆನಕಾ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರಿಗೆ ನಗರಸಭೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಬಾರ್ ಸಿಬ್ಬಂದಿಗಳು ರಸ್ತೆ ಪಕ್ಕದ ಕಾರುಗಳಲ್ಲಿ ಕುಳಿತವರಿಗೆ ಮದ್ಯ ಸರಬರಾಜು ಮಾಡುತ್ತಿದ್ದು ಮದ್ಯವ್ಯಸನಿಗಳು ಪ್ಲಾಸ್ಟಿಕ್ ಲೋಟ ಹಾಗೂ ಕಂಟೇನರ್‌ಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರವನ್ನು ಹಾಳು ಮಾಡುತ್ತಿದ್ದರು. ಇದರಿಂದ ಬೇಸತ್ತಿದ್ದ ಸಾರ್ವಜನಿಕರು ಹಾಗೂ ರಸ್ತೆ ಸಂಚಾರಿಗಳು ಮದ್ಯವ್ಯಸನಿಗಳ ಕಿರಿಕ್ ಬಗ್ಗೆ ದೂರಿದ್ದರು. ಈ ಹಿನ್ನೆಲೆಯಲ್ಲಿ ಜಯನಗರ ವಾರ್ಡ್ ಸದಸ್ಯ ಕುಮಾರ್ ಗೌಡ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷರು ಹಾಗೂ ಹೆಲ್ತ್ ಇನ್ಸ್‌ಪೆಕ್ಟರ್ ಇಂದು ಬೆಳಿಗ್ಗೆ ಬಾರ್ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ್ದಾರೆ. ಚರಂಡಿ ಹಾಗೂ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಸವನ್ನು ನಗರಸಭೆ ಸಿಬ್ಬಂದಿಗಳು ಮತ್ತೆ ಬಾರ್ ಒಳಗೇ ಸುರಿಯುವ ಮೂಲಕ ಮಾಲೀಕರಿಗೆ ಪಾಠ ಕಲಿಸಿದ್ದಾರೆ. ದಾಳಿ ವೇಳೆ ಪ್ಲಾಸ್ಟಿಕ್ ಲೋಟ ಹಾಗೂ ಇತರ ತ್ಯಾಜ್ಯಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು ಬಾರ್ ಮಾಲೀಕರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಒಂದು ವೇಳೆ ಇದೇ ಚಾಳಿ ಮುಂದುವರಿದಲ್ಲಿ ಬಾರ್ ಅನ್ನು ಶಾಶ್ವತವಾಗಿ ಕ್ಲೋಸ್ ಮಾಡಿಸುವುದಾಗಿ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *