Malnad Tv
ಚಿಕ್ಕಮಗಳೂರು: ವಿದ್ಯುತ್ ವಾಟರ್ ಹೀಟರ್ನಿಂದ ಅವಘಡ – ವಿದ್ಯುತ್ ಶಾಕ್ಗೆ 8 ವರ್ಷದ ಬಾಲಕ ಬಲಿ!
ಹಾಸನ ನಗರದಲ್ಲಿ ಎಲ್ಲಿ ನೋಡಿದರೂ ಜನಜಂಗುಳಿ! ಶ್ರೀ ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ
ಕಾಫಿ ಮಂಡಳಿ ಅಧ್ಯಕ್ಷರಾಗಿ ದಿನೇಶ್ ದೇವವೃಂದ ಅವರೇ ಮುಂದುವರಿಯಲಿ ಕೇಂದ್ರ ಸರ್ಕಾರಕ್ಕೆ ಹೊಲದಗದ್ದೆ ಗಿರೀಶ್ ಒತ್ತಾಯ
ಕಾಫಿ ಮಂಡಳಿ ಅಧ್ಯಕ್ಷರಾಗಿ ದಿನೇಶ್ ದೇವವೃಂದ ಅವರನ್ನೇ ಮುಂದುವರಿಸಲು ಒತ್ತಾಯ ಚಿಕ್ಕಮಗಳೂರು: ಭಾರತೀಯ ಕಾಫಿ ಮಂಡಳಿಗೆ ಹೊಸ ರೂಪ ನೀಡುವ ಮೂಲಕ ಕಾಫಿ ಉದ್ಯಮದ ಅಭಿವೃದ್ಧಿಗೆ ಶ್ರಮಿಸಿರುವ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರ ಅಧಿಕಾರಾವಧಿ ನವೆಂಬರ್ನಲ್ಲಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಅವಧಿಗೂ ದಿನೇಶ್ ದೇವವೃಂದ ಅವರನ್ನೇ ಅಧ್ಯಕ್ಷರಾಗಿ ಮುಂದುವರಿಸಬೇಕು ಎಂದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಮುಖಂಡ ಹೊಲದಗದ್ದೆ ಗಿರೀಶ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ದಿನೇಶ್ ದೇವವೃಂದ ಅವರು ಕಾಫಿ ಮಂಡಳಿ ಅಧ್ಯಕ್ಷರಾದ ಬಳಿಕ ಕಾಫಿ ಉದ್ಯಮಕ್ಕೆ ಹೊಸ ಬಲ ತುಂಬುವ ಕೆಲಸ ಮಾಡಿದ್ದಾರೆ. ಭಾರತೀಯ ಕಾಫಿಯನ್ನು ಜಾಗತಿಕ ಮಟ್ಟದಲ್ಲಿ ಬ್ರಾಂಡ್ ಮಾಡುವ ಉದ್ದೇಶದಿಂದ ಹಲವು ಮಹತ್ವದ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ.